ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರಕರಣಗಳಲ್ಲಿ ಸಾಕ್ಷಾ ್ಯಧಾರವೇ ಪ್ರಮುಖ

Rashmi Kasaragodu
Updated On : 3 Jul 2014, 1:38 am

ಶಿಡ್ಲಘಟ್ಟ: ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿ ದಕ್ಷತೆಯಿಂದ ಕೆಲಸ ಮಾಡಿದಾಗ ಠಾಣೆಗೆ ಬರುವ ಜನತೆಗೆ ನ್ಯಾಯ ಒದಗಿಸಲು ಸಾಧ್ಯ ಎಂದು ವರ್ಗಾವಣೆಗೊಂಡಿರುವ ಸಿವಿಲ್ ನ್ಯಾಯಾಧೀಶ ಎಸ್. ಮಹೇಶ್ ಹೇಳಿದರು.
ಪಟ್ಟಣದ ಗ್ರಾಮಾಂತರ ಠಾಣೆಯಲ್ಲಿ ಸನ್ಮಾನ ಸ್ವೀಕರಿಸಿ, ಯಾವುದೇ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಾಕ್ಷಾಧಾರಗಳನ್ನು ಒದಗಿಸುವಲ್ಲಿ ಅಗತ್ಯವಾದ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾದರೆ ಇಡೀ ಪ್ರಕರಣ ಕೈ ತಪ್ಪಿಹೋಗುತ್ತದೆ.
ಅಧ್ಯಯನ: ನ್ಯಾಯಾಲಯದಲ್ಲಿ ವಿಚಾರಣೆ ಬರುವ ಮುನ್ನಾ ಪ್ರಕರಣದ ಸಂಪೂರ್ಣ ವಿವರವನ್ನು ಅರ್ಥ ಮಾಡಿಕೊಂಡು ತಯಾರಿಯಾಗಿ ಬರಬೇಕು. ನ್ಯಾಯಾಲಯದ ತೀರ್ಪಿನ ಪ್ರತಿಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡುವುದರಿಂದ ನ್ಯಾಯಾಲಯ ಎಂತಹ ಸಾಕ್ಷ್ಯಾಧಾರಗಳನ್ನು ಬಯಸುತ್ತದೆ ಎನ್ನುವ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದರು.
ಪ್ರತಿ ಸಂದರ್ಭದಲ್ಲೂ ವಿಡಿಯೋ ಚಿತ್ರಿಕರಣಸಹಿತ ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಪ್ರಯತ್ನಿಸುವುದು  ಉತ್ತಮ. ಬಹಳಷ್ಟು ಮಂದಿ ಸಾಕ್ಷಿಗಳಾಗಿ ಸಹಿ ಹಾಕಿದರೂ ಪ್ರಕರಣಗಳನ್ನು ತಿರುಚುವ ಉದ್ದೇಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದರು. ಗ್ರಾಮಾಂತರ ಠಾಣೆಯ ಪಿಎಸ್‌ಐಪಿಬಿ ಹನುಮಂತಪ್ಪ ಹಾಗೂ ಠಾಣೆ ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement